ನೀವು ಜವಾಬ್ದಾರಿಯುತ ಗೇಮರ್ ಆಗಲು 3 ಕಾರಣಗಳು

Share

ಗೇಮಿಂಗ್ ವಿಷಯಕ್ಕೆ ಬಂದಾಗ, ನೀವು ತುಂಬಾ ಜವಾಬ್ದಾರಿಯುತವಾಗಿರಬೇಕು. ಇದು ಏಕೆಂದರೆ ನೀವು ಹಾರ್‍ಡ್ಕೋರ್ ಗೇಮರ್ ಆಗಿದ್ದರೂ ಕೂಡ, ನೀವು ಮಾಡುವ ಯಾವುದೇ ವಿಷಯದಲ್ಲೂ ಯಶಸ್ಸು ಗಳಿಸಲು ಶಿಸ್ತೇ ಅತ್ಯಂತ ಪ್ರಮುಖವಾದ್ದು. ‌

ನೀವು ಈಗಾಗಲೇ ‌ಜವಾಬ್ದಾರಿಯುತ ಗೇಮಿಂಗನ್ನು ಅಭ್ಯಾಸ ಮಾಡುತ್ತಿಲ್ಲವಾದಲ್ಲಿ ಅದನ್ನು ನೀವು ಅಭ್ಯಾಸ ಮಾಡಬೇಕು ಎಂಬುದಕ್ಕೆ 3 ಕಾರಣಗಳತ್ತ ನೋಡೋಣ…  

ದೈನಂದಿನ ಜೀವನಕ್ಕೆ ಸಮಯ ಕೊಡಿ 

ಗೇಮಿಂಗ್-ಅನ್ನು ಮನೋರಂಜನೆಯ‌ ಮೂಲ ಎಂಬಂತೆ ನಡೆಸಿಕೊಳ್ಳಿರಿ; ಅದೊಂದೇ ನಿಮ್ಮನ್ನು ಆಕ್ರಮಿಸಿಕೊಂಡು, ನೀವು ಅದರಿಂದ ಆಚೆಗೇ ಬರಲಾಗದೇ, ಬದುಕಿನ ಉಳಿದೆಲ್ಲ ಪ್ರಮುಖ ಅಂಶಗಳನ್ನೂ ನಿರ್ಲಕ್ಷಿಸುವಂತೆ ಆಗದಿರಲಿ. ನೀವು ನಿಮ್ಮ ಕುಟುಂಬ ಮತ್ತು ಗೆಳೆಯರೊಂದಿಗೆ ಉತ್ತಮವಾದ ಸಮಯವನ್ನು ಕಳೆಯುವದನ್ನು ಮರೆಯಬೇಡಿ. ಮೂಲತಃ, ಸಾಮಾಜಿಕವಾಗಿರುವುದು ಮುಖ್ಯ..

ಗೇಮಿಂಗ್ ಎನ್ನುವುದು ಮನೋರಂಜನೆಯಿಂದ ಚಟವಾಗಿ ಬದಲಾಗಿಬಿಟ್ಟ ಕ್ಷಣದಿಂದ ನಿಮ್ಮ ಹೆಜ್ಜೆಗಳು ಅಪಾಯಕಾರೀ ಸ್ಥಳದತ್ತ ಸಾಗುತ್ತದೆ. ಏಕೆಂದರೆ ನೀವು ಅತಿಹೆಚ್ಚು ಸಮಯವನ್ನು ಗೇಮಿಂಗ್-ನಲ್ಲೇ ಕಳೆಯುತ್ತಾ ಉಳಿದೆಲ್ಲವನ್ನೂ ಮರೆತುಬಿಡುತ್ತೀರಿ. ಹಾಗಾಗಿ ಬದುಕಿನಲ್ಲಿ ಸಮತೋಲನವನ್ನು ನೀವು ಕಾಪಾಡಿಕೊಳ್ಳಿರಿ. ‌

ನೀವು ನಿಮಗೋಸ್ಕರ ಯೋಚಿಸಲು ಸಮಯವನ್ನು ನೀಡಿ 

ಆಟ ಆಡುವಾಗ, ಕೆಲವು ಸಂದರ್ಭಗಳಲ್ಲಿ ನೀವು ಒತ್ತಡವನ್ನು ಎದುರಿಸಬೇಕಾಗುತ್ತದೆ ಏಕೆಂದರೆ ನೀವು ಅಂದುಕೊಂಡಂತೆ ಆಟ ನಡೆಯುತ್ತಿರುವುದಿಲ್ಲ. ಅಂಥಾ ಸಂದರ್ಭಗಳಲ್ಲಿ, ನೀವು ವಿರಾಮ ಪಡೆದು ಯೋಚಿಸಲು ಸ್ವತ: ಸಮಯ ತೆಗೆದುಕೊಳ್ಳಬೇಕಾದ್ದು ಮುಖ್ಯ.

ನಿಮ್ಮ ಮತ್ತು ನಿಮ್ಮ ಎದುರಾಳಿಗಳ ನಡೆಗಳ ಪುನರಾವಲೋಕನ ಮಾಡಿಕೊಳ್ಳಲು ಸ್ವತ: ಸಮಯ ತೆಗೆದುಕೊಂಡಾಗ ಮಾತ್ರವೇ ನಿಮ್ಮ ಮುಂದಿನ ಆಟ‌ ಉತ್ತಮವಾಗಲು ಸಾಧ್ಯ. 

ಇದು ನಿಮಗೆ ಉತ್ತಮವಾದ ನಡೆಗಳನ್ನು ನಡೆಸಲು ಸಹಕಾರಿ ಆಗುತ್ತದೆ. ನೀವು ವಿಶೇಷವಾಗಿ ರಮ್ಮೀ ಆಟ ಅಥವಾ ಇನ್ಯಾವುದೇ ಜಟಿಲ ನಿರ್ಣಯ ತೆಗೆದುಕೊಳ್ಳುವ‌ ಆಟದಲ್ಲಿ ನಿಜವಾಗಿ ಸಹಕಾರಿ. ಪ್ರತಿಯೊಬ್ಬರೂ ಆಗೊಮ್ಮೆ ಈಗೊಮ್ಮೆ ಒಂದೊಂದು ಬ್ರೇಕ್ ತೆಗೆದುಕೊಳ್ಳಲು ಅರ್ಹರು ಎಂದಾಗ—ನೀವೂ ಒಂದು ಬ್ರೇಕ್ ತಗೊಳ್ಳಿ!  

ಎಂದೆಂದೂ ಹೆಚ್ಚು ಹೊತ್ತು ಕೂರಬೇಡಿ

ಒಂದೇ ಜಾಗದಲ್ಲಿ ಹೆಚ್ಚು ಹೊತ್ತು ಕೂರುವುದು ಎಂದಿಗೂ ಒಳ್ಳೆಯದಲ್ಲ. ಗೇಮಿಂಗ್ ನಮಗೆ ಸಮಯದ ಜಾಡು ಕಳೆದುಕೊಳ್ಳುವಂತೆ ಮಾಡುತ್ತದೆ. ಹಾಗಾಗಿ, ನೀವು ಎದ್ದು ಸ್ವಲ್ಪ ಹೊತ್ತು ಓಡಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ, ಒಂದೇ ಜಾಗದಲ್ಲಿ ಹೆಚ್ಚು ಹೊತ್ತು ಕೂರುವಂತೆ ಆಗದಿರಲಿ.

ನೀವು ತಿಳಿದಂತೆ, ಒಂದೇ ಜಾಗದಲ್ಲಿ ಹೆಚ್ಚು ಕಾಲ ಕೂತಿರುವುದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟುಮಾಡುವುದು. ಪ್ರತಿದಿನ 6,000 ಹೆಜ್ಜೆ ನಡೆಯುವುದು ನಿಮಗೆ ಒಳ್ಳೆಯ ಆರೋಗ್ಯ ಕೊಡುತ್ತದೆ. ಹಾಗಾಗಿ, ನೀವು ಗೇಮ್ಸ್ ಆಡಿ ಸಮಯ ಕಳೆಯಲು ನಿರ್ಧರಿಸಿದಾಗ, ಸ್ವಲ್ಪ ಹೊತ್ತು ತಡೆಹಿಡಿಯಿರಿ ಮತ್ತು ಆಗಾಗ‌ ಸ್ವಲ್ಪ ಹೊತ್ತು ನಡೆಯಿರಿ.ಶುಭಾಷಯಗಳು, ನೀವೀಗ ಜವಾಬ್ದಾರಿಯುತ ಗೇಮರ್… ಈಗಲೇ ರಮ್ಮೀ ಆಡ ಬನ್ನಿ!